Request for Proposals: Artists | Deadline: July 31, 2022 (CLOSED)
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್
ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಕಲಾ ಸಂಯೋಜಿತ ಯೋಜನೆಗಳನ್ನು ನೆಡೆಸಲು
ಕಲಾವಿದರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ
ಪ್ರಸ್ತಾವನೆಗಳನ್ನು ಸಲ್ಲಿಸಲು ಕಡೆಯ ದಿನಾಂಕ: July 31, 2022
Click here to read the call in English.
ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಕಲಾಸಂಯೋಜಿತ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್ಎ) ಸಂಸ್ಥೆಯು ಈ ಯೋಜನೆಗಳ ಸುಗಮಕಾರರಾಗಿ ಭಾಗಿಯಾಗಲು ಕಲಾವಿದರಿಂದ ಪ್ರಸ್ತಾವನೆಗಳನ್ನು ಕೋರುತ್ತಿದೆ.
ಕಲಿ ಕಲಿಸು ಅನ್ನುವುದು ಪಠ್ಯಬೋಧನಾ ಕಾರ್ಯದಲ್ಲಿ ಶಿಕ್ಷಕರು ಕಲಾ ಮಾಧ್ಯಮವನ್ನು ಅಳವಡಿಸಿಕೊಳ್ಳುವುದರ ಜೊತೆಯಲ್ಲೇ ವಿದ್ಯಾರ್ಥಿಗಳಲ್ಲಿ ಕಲಿಕೆ ಎಂಬುದನ್ನು ನಿರಂತರ ಕ್ರಿಯೆಯಾನ್ನಾಗಿಸುವ ಪ್ರಯತ್ನ. ಕತೆ, ಹಾಡು, ನಾಟಕ, ಚಿತ್ರಕಲೆ ಮತ್ತು ಯಾವುದೇ ಸ್ಥಳೀಯ ಕಲಾ ಪ್ರಕಾರಗಳ ಮುಖಾಂತರ ಶಾಲಾ ಕೊಠಡಿಯನ್ನು ದಾಟಿ ಹೊರಜಗತ್ತಿನೊಂದಿಗೆ ವಿಶೇಷವಾದ ಸಂಬಂಧವಂದನ್ನು ಗಟ್ಟಿಯಾಗಿ ಕಟ್ಟಿಕೊಡುವ ಸೃಜನಶೀಲ ನಡೆ ಹಾಗು ಪಠ್ಯಕ್ರಮಗಳ ಸಂಯೋಜಿತ ಪ್ರಯತ್ನಗಳಿಂದ ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ವ್ಯವಸ್ಥೆಯನ್ನು ತರುವ ಆಸೆ.
ಮೇಲಿನ ಉದ್ದೇಶಗಳನ್ನು ಆಧರಿಸಿ, ಐಎಫ್ಎಯು ಯೋಜನೆಯ ಪ್ರಸ್ತಾವನೆಗಳನ್ನು ಕೋರುತ್ತಿದೆ. ಶಾಲಾ ಪಠ್ಯಕ್ರಮಗಳಿಗೆ ಪೂರಕವಾಗಿ ಕಾರ್ಯಗೊಳ್ಳುವ ಈ ಯೋಜನೆಗಳು ಕಲಾಸಂಯೋಜಿತ ಬೋಧನಾಕ್ರಮಗಳಿಗೆ ಭದ್ರವಾದ ಬುನಾದಿಯನ್ನು ನಿರ್ಮಿಸಿಕೊಡಬೇಕು. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಂಶೋಧನಾ ಗುಣವನ್ನು ಪ್ರೋತ್ಸಾಹಿಸುವ ಕಲಾ ಸಂಯೋಜಿತ ಕಾರ್ಯಯೋಜನೆಗಳನ್ನು ತಮ್ಮ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ತಿಳಿಸುವುದು ಅಪೇಕ್ಷಣೀಯ. ಕಲಿ ಕಲಿಸು NEP (National Education Policy) 2020ರ ಉದ್ದೇಶಗಳನ್ನು ಸಹ ಆಧರಿಸಿರುತ್ತದೆ.
ಕಳೆದ ವರ್ಷಗಳ ಯೋಜನೆಗಳ ಮಾಹಿತಿ ಪಡೆಯಲು ಈ ಲಿಂಕ್ ನ್ನು ಒತ್ತಿ
ರಾಧಿಕಾ ಭಾರದ್ವಾಜ್ (ಕಾರ್ಯಕ್ರಮ ನಿರ್ವಾಹಕರು, ಕಲಾ ಶಿಕ್ಷಣ)
ಕಲಾ ಶಿಕ್ಷಣದ ಕಲಿ ಕಲಿಸು ಯೋಜನೆಯಡಿಯಲ್ಲಿ ಪ್ರಸ್ತಾವನೆಗಳನ್ನು ಕಳುಹಿಸಲು ಕಲಾವಿದರನ್ನು ಆಹ್ವಾನಿಸಿದ್ದಾರೆ.
ಯೋಜನೆಗಳ ಪ್ರಸ್ತಾವನೆಗಳನ್ನು ಯಾರು ಸಲ್ಲಿಸಬಹುದು?
- ಕಲಾ ಶಿಕ್ಷಣದಲ್ಲಿ ಪೂರ್ವಾನುಭವ ಇರುವ/ಇಲ್ಲದಿರುವ ಕಲಾವಿದರು ಅಥವಾ ಕಲಾಶಿಕ್ಷಣದಲ್ಲಿ ಸೂಕ್ತವಾದ ತರಬೇತಿ ಪಡೆದವರು/ಪಡೆಯದವರು ಪ್ರಸ್ತಾವನೆಗಳನ್ನು ಸಲ್ಲಿಸಬಹುದು. ಆದಾಗ್ಯೂ, ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯ ಪೂರ್ವಾನುಭವ ಇಲ್ಲದಿರುವ ಕಲಾವಿದರು ಮಕ್ಕಳೊಂದಿಗೆ ಕಾರ್ಯನಿರ್ವಹಿಸಿದ ಅನುಭವವನ್ನಾದರೂ ಹೊಂದಿರಬೇಕು.
- ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು.
- ಭಾರತೀಯ ಪ್ರಜೆಗಳಾಗಿರಬೇಕು.
- ಅರ್ಹತಾ ಮಾನದಂಡಗಳನ್ನು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಲಿಂಕ್ ಅನ್ನು ಒತ್ತಿ
ಯೋಜನೆಯ ವ್ಯಾಪ್ತಿ
ಕಾರ್ಯಗತಗೊಳಿಸಲು ಬಯಸುವ ಯೋಜನೆಗಳು ಕೆಳಕಂಡ ಯಾವುದಾದರು ಅಂಶಗಳನ್ನು ಸ್ಪಷ್ಟವಾಗಿ ಒಳಗೊಂಡಿರಬೇಕು.
- ಯೋಜನೆಯ ಪರಿಧಿಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಸೇವೆಯಲ್ಲಿ ತೊಡಗಿರುವವರು ಹೀಗೆ ಇನ್ನೂ ಹಲವು ಪಾಲುದಾರರು ಭಾಗವಹಿಸುವಂತಿರಬೇಕು.
- ತರಗತಿಯ ಬೋಧನಾ ಕ್ರಮಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಅಥವಾ ಕಲಾ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿರಬೇಕು.
- ಯೋಜನೆಯು, ವಿದ್ಯಾರ್ಥಿ ಕೇಂದ್ರಿತ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗಕಲೆ, ಸಂಗೀತ, ಜಾನಪದ, ದೃಶ್ಯಕಲೆ, ಛಾಯಾಚಿತ್ರ ಕಲೆ, ಚಲನಚಿತ್ರ, ಸಾಹಿತ್ಯ ಕಲೆಯಲ್ಲದೆ ಯಾವುದಾದರೂ ಒಂದು ಕಲೆಯನ್ನು ವಿಶೇಷವಾಗಿ ಅಭ್ಯಸಿಸುವಂಥದ್ದಾಗಿರಬೇಕು.
- ಯೋಜನೆಯು ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂಬಂಧಿ ಅರಿವು ಮೂಡಿಸಲು.
- ಯೋಜನೆಯು ಕರೋನ ಸಾಂಕ್ರಾಮಿಕದ ಈ ಮುಂದಿನ ದಿನಗಳಲ್ಲಿ, ಕಲಾ ಅಂತರ್ಗತ ಕಲಿಕೆಯ ನಿರಂತರ ಸಾಧ್ಯತೆಗಳನ್ನು ಪ್ರತಿಪಾದಿಸುವಂತಿರಬೇಕು.
ಇದಲ್ಲದೆ ಇನ್ನಿತರ ಅಲ್ಪಾವಧಿ ಅಥವ ದೀರ್ಘಾವಧಿಯ ನೂತನ ಮತ್ತು ಸೃಜನಶೀಲ ಕಲಾ ಶಿಕ್ಷಣ ಯೋಜನೆಗಳನ್ನು ಸಹ ಪರಿಗಣಿಸಲಾಗುವುದು.
ಯೋಜನಾ ಪ್ರಸ್ತಾವನೆ ಸಲ್ಲಿಸುವ ವಿಧಾನ:
- ನಿಮ್ಮ ಯೋಜನೆಯನ್ನು ಕನ್ನಡ, ಉರ್ದು, ಹಿಂದಿ, ಮರಾಠಿ, ತೆಲುಗು ಹಾಗು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು.
- ಯೋಜನೆಯ ನಿರೀಕ್ಷಿತ ಕಾಲಾವಧಿ ಕನಿಷ್ಠ ಒಂಬತ್ತು ತಿಂಗಳದ್ದಾಗಿರಬೇಕು ಹಾಗೂ ಗರಿಷ್ಟ ೧೮ ತಿಂಗಳ ಅವಧಿಯದ್ದಾಗಿರಬೇಕು.
- ಯೋಜನೆಗೆ ಸಂಬಂದಪಟ್ಟ ಪ್ರಶ್ನೆಗಳಿದ್ದಲ್ಲಿ, ನಿಮ್ಮ ಹೊಳಹುಗಳ ಬಗ್ಗೆ ಚರ್ಚಿಸ ಬಯಸಿದಲ್ಲಿ ಅಥವಾ ನಿಮ್ಮ ಕರಡು ಪ್ರಸ್ತಾವನೆಯನ್ನು ನಮಗೆ ಕಳುಹಿಸ ಬಯಸಿದಲ್ಲಿ, June 30, 2022ರ ಒಳಗೆ ನಮ್ಮನ್ನು ಸಂಪರ್ಕಿಸಿ.
- ನಿಮ್ಮ ಅಂತಿಮ ಪ್ರಸ್ತಾವನೆಯು ಇಮೇಲ್ ಮೂಲಕ: July 31, 2022ರ ಒಳಗೆ ನಮಗೆ ಸೇರಬೇಕು.
- ಕೊನೆಯ ಸುತ್ತಿಗೆ ಆಯ್ಕೆಯಾದ ಪ್ರಸ್ತಾವನೆಗಳನ್ನು ಬಾಹ್ಯ ತಜ್ಞರ ಆಯ್ಕೆ ಸಮಿತಿ ಮೌಲ್ಯಮಾಪನ ಮಾಡುತ್ತದೆ. ಇದಕ್ಕಾಗಿ ಅರ್ಚಿದಾರರು ತಮ್ಮ ಯೋಜನೆಯ ಪರಿಕಲ್ಪನೆಯನ್ನು ಈ ಸಮಿತಿಯ ಮುಂದೆ ಪ್ರತಿಪಾದಿಸಬೇಕಾಗುತ್ತದೆ.
- August 31, 2022ಕ್ಕೆ ಆಯ್ಕೆಯಾದ ಯೋಜನೆಗಳ ಪಟ್ಟಿಯನ್ನು ನಿರೀಕ್ಷಿಸಬಹುದು.
ನಿಮ್ಮ ಅಂತಿಮ ಪ್ರಸ್ತಾವನೆಯು ಈ ಕೆಳಕಂಡ ಕನಿಷ್ಠ ವಿಷಯಗಳ ವಿವರಗಳನ್ನು ಒಳಗೊಂಡಿರಬೇಕು.
- ಯೋಜನೆಯನ್ನು ಕೈಗೊಳ್ಳಲು ವಿನಂತಿ ಪತ್ರ.
- ನಿಮ್ಮ ವಯಕ್ತಿಕ ಪರಿಚಯ.
- ನೀವು ಆಯ್ಕೆ ಮಾಡಿಕೊಂಡ ಶಾಲೆಯ ಸಂಪೂರ್ಣ ಮಾಹಿತಿ.
- ಆಯ್ಕೆ ಮಾಡಿಕೊಂಡ ಶಾಲೆಯ ಮುಖ್ಯೋಪಾಧ್ಯಾಯರ ಒಪ್ಪಿಗೆ ಪತ್ರ.
- ಯೋಜನೆಯ ಉದ್ದೇಶಗಳು.
- ಕಾರ್ಯ ಯೋಜನೆಗಳ ವಿವರ.
- ಯೋಜನಾವಧಿಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ ವಿವರ.
- ಯೋಜನೆಯಿಂದ ಬರಬಹುದಾದ ಅಪೇಕ್ಷಿತ ಫಲಿತಾಂಶಗಳು.
- ಖರ್ಚು- ವೆಚ್ಚಗಳ ವಿವರ.
ಬಜೆಟ್:
- ಗರಿಷ್ಠ ರೂ. 2,00,000/- ವರೆಗೆ.
- ಅರ್ಜಿದಾರರು ಸಂಪೂರ್ಣ ಬಜೆಟ್ ನಲ್ಲಿ ಗರಿಷ್ಠ ೪೦% ರಷ್ಟು ಗೌರವಧನವನ್ನು ಪರಿಗಣಿಸಬಹುದು.
- ಖರ್ಚು-ವೆಚ್ಚದ ಲೆಕ್ಕದಲ್ಲಿ ಗೌರವಧನವು ಸೇರಿರುತ್ತದೆ.
ಪ್ರಸ್ತಾವನೆಯ ಸಲ್ಲಿಕೆ:
- ನಿಮ್ಮ ಅಂತಿಮ ಪ್ರಸ್ತಾವನೆಯು 25 MB ಯ ಒಳಗಿದ್ದು, ಇಮೇಲ್ ಮೂಲಕ ರಾಧಿಕಾ ಭಾರದ್ವಾಜ್, ಸಹಾಯಕ ಕಾರ್ಯಕ್ರಮ ಅಧಿಕಾರಿಗಳು, ಕಲಾ ಶಿಕ್ಷಣ ಇವರಿಗೆ radhika@indiaifa.org ಕಳುಹಿಸಿಕೊಡಿ.
- ನಿಮ್ಮ ಇಮೇಲ್ ವಿಷಯ ಇಂತಿರಲಿ: ‘ಕಲಾ ಶಿಕ್ಷಣದಡಿ ಯೋಜನೆಯ ಪ್ರಸ್ತಾವನೆ (ಕಲಾವಿದರು).
- ದೂರವಾಣಿ ಸಂಖ್ಯೆ: 7829327739 (ದಯವಿಟ್ಟು ಸೋಮವಾರದಿಂದ ಶುಕ್ರವಾರದ ಒಳಗೆ ಬೆಳಗ್ಗೆ ೧೦ ರಿಂದ ಸಂಜೆ ೪ರ ಒಳಗೆ ಕರೆ ಮಾಡಿ).
ದಯವಿಟ್ಟು ಗಮನಿಸಿ, ಅಪೂರ್ಣ ಪ್ರಸ್ತಾವನೆಗಳು ಮತ್ತು ಅರ್ಹತಾ ಮಾನದಂಡಗಳ ಪಟ್ಟಿಯಲ್ಲಿ ಸೇರದ ಅರ್ಜಿದಾರರನ್ನು ಕಡೆಗಣಿಸಲಾಗುವುದು.
ಎಲ್ಲಾ ಆಯ್ಕೆಯಾದ ಯೋಜನೆಗಳನ್ನು ಐ.ಎಫ್.ಎ ಸಂಸ್ಥೆ ಕಾರ್ಯಗತಗೊಳಿಸುತ್ತದೆ.
For more information on Kali-Kalisu click here